Loading...

ಅಲ್ಪಸಂಖ್ಯಾತರ ಯೋಜನೆಗಳು

ಅಲ್ಪಸಂಖ್ಯಾತರ ಯೋಜನೆಗಳು

ವಿವರಗಳು

ಯೋಜನೆಯ ಹೆಸರು:
‘ಗಂಗಾ ಕಲ್ಯಾಣ' ಯೋಜನೆ (2021-22 ನೇ ಸಾಲಿಗೆ ಮಾತ್ರ)
ವಿವರಣೆ:

ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಹರಿಯುವ ನೀರಿನ ವ್ಯವಸ್ಥೆ ಲಭ್ಯವಿರುವುದಿಲ್ಲವೋ ಅಂತಹ ಸ್ಥಳದಲ್ಲಿ ತಜ್ಞ ಭೂವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ನೆಲದಡಿಯಲ್ಲಿ ಕೊಳವೆಬಾವಿಯನ್ನು ಕೊರೆದು, ನಂತರ ನೀರು ಸಂಗ್ರಹಿಸಲು ಟ್ಯಾಂಕ್‌ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನುಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ 01 ಎಕರೆ 20 ಗುಂಟೆಯಿAದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗೆ ಒಂದು ಕೊಳವೆಬಾವಿ ಕೊರೆಯಿಸಿ ಅದಕ್ಕೆ ನಿಗಮದಿಂದ ಪಂಪ್‌ಸೆಟ್‌ನ್ನು ಅಳವಡಿಸಲಾಗುವುದು. ಪಂಪ್‌ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ.1.50 ಲಕ್ಷವಾಗಿದೆ. ಅರ್ಜಿದಾರರು ವೆಬ್ ಪೇಜ್ ಮೂಲಕ ಆನ್-ಲೈನ್ ಅರ್ಜಿಯನ್ನು ಸಲ್ಲಿಸಬೇಕು. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರ್ಕಾರವು ರೂ.2.00ಲಕ್ಷಗಳನ್ನು ನಿಗದಿಪಡಿಸಿರುತ್ತದೆ. ಈ ಮೊತ್ತದಲ್ಲಿ ಕೊಳವೆ ಬಾವಿಯ ಕೊರೆಯುವಿಕೆ, ಪಂಪ್‌ಸೆಟ್ಸ್ ಸರಬರಾಜು ಮತ್ತು ವಿದ್ಯುದ್ದೀಕರಣದ ಠೇವಣಿ ಮೊತ್ತವನ್ನು ಭರಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ರೂ.2,00,000/-ಗಳು ಸಹಾಯಧನ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗೆ ಸಹಾಯಧನ ರೂ.3.50 ಲಕ್ಷಗಳುವಾಗಿರುತ್ತದೆ. ಇದರಲ್ಲಿ ರೂ. 50,000/- ವಿದ್ಯದ್ದೀಕರಣ ವೆಚ್ಚಕ್ಕೆ ಮೀಸಲು. ಈ ಸೌಲಭ್ಯ ಪಡೆಯ ಬಯಸುವ ಫಲಾನುಭವಿಗಳು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಅಂದರೆ ಪ್ರತಿ ಫಲಾನುಭವಿಗೆ 1 ಎಕರೆ 20ಗುಂಟೆ (1 ಎಕರೆ 50ಸೆಂಟ್ಸ್) ಎಕರೆಯಿಂದು 5 ಎಕರೆಯವರೆಗೆ ಕುಷ್ಕಿ ಜಮೀನಿರಬೇಕು ಮತ್ತು ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿರಬೇಕು. ಸರ್ಕಾರಿ ಆದೇಶ ಸಂಖ್ಯೆ: ಸಕಇ 168 ಬಿಎಮ್‌ಎಸ್ 2010 ದಿನಾಂಕ 25-07-2011 ರಲ್ಲಿ ಸೂಚಿಸಿರುವಂತೆ ಮಡಿಕೇರಿ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಗರಿಷ್ಠ 1 ಎಕರೆ ಜಮೀನನ್ನು ಹೊಂದಿರತಕ್ಕದ್ದು. ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಅರ್ಜಿ 3 ಭಾವಚಿತ್ರ, ವಾರ್ಷಿಕ ಆದಾಯ ಪ್ರಮಾಣ ಪತ್ರ, ಆಧಾರಕಾರ್ಡ್/ಚುನಾವಣ ಗುರುತಿನ ಚೀಟಿ/ರೇಷನ್ ಕಾರ್ಡ್ ನಕಲು, ಪಹಣಿ, ರೆರ್ಕಾರ್ಡ್ ಆಪ್ ರೈಟ್ಸ್ ಪಡೆದು ಆಯ್ಕೆ ಸಮಿತಿಯಲ್ಲಿ ಮಂಡಿಸಿ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಫಲಪೇಕ್ಷಿಗಳನ್ನು ಆಯ್ಕೆ ಮಾಡಲಾಗುವುದು.


ಅರ್ಹತೆ:

ಫಲಾನುಭವಿಯು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು. ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ವಾರ್ಷಿಕ ಕೌಟುಂಬಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.81,000/ಗಳು ಹಾಗೂ ನಗರ ಪ್ರದೇಶಗಳಲ್ಲಿ ರೂ.1.03 ಲಕ್ಷಗಳನ್ನು ಮೀರಿಬಾರದು. ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು ಅರ್ಜಿದಾರರ ವಯಸ್ಸು 18 ರಿಂದ 55 ವರ್ಗಗಳ ಮಿತಿಯಲ್ಲಿರಬೇಕು.


ಸ್ಥಿತಿ:
Active
Link:
https://kmdconline.karnataka.gov.in/Portal/login