Loading...
ಇತ್ತೀಚಿನ ಸುದ್ದಿ ಮತ್ತು ಘಟನೆಗಳು
ಲಿಂಕುಗಳು

ಪ್ರಮುಖ ಲಿಂಕುಗಳು

ನಮ್ಮ ಬಗ್ಗೆ

KSMC ಗೆ ಸ್ವಾಗತ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸರ್ಕಾರಿ ಆದೇಶ ಸಂ: DPAR 01 LMR 83 ದಿ: 09.05.1983 ರನ್ವಯ ರಚಿಸಲಾಗಿದೆ. ಜಾತ್ಯಾತೀತ ಸಂಪ್ರದಾಯದ ಸಂರಕ್ಷಣೆ, ರಾಷ್ಟ್ರೀಯ ಐಕ್ಯತೆಯ ಪ್ರಚೋದನೆ ಹಾಗೂ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಕಲ್ಪಿಸಿರುವ ರಕ್ಷಣೆಗಳನ್ನು ಪರಿಣಾಮಕಾರಿಯಾಗಿ ಜಾರಿ ಹಾಗೂ ಅನುಷ್ಠಾನಗೊಳಿಸುವುದು ಮತ್ತು ಈ ಕುರಿತು ಕೇಂದ್ರ ಹಾಗೂ ರಾಜ್ಯ ನಿಯಮಗಳು ಹಾಗೂ ರಾಜ್ಯ ನೀತಿ ಮತ್ತು ಯೋಜನೆಗಳನ್ನು ವಿಕಸಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು Commissions of Inquiry Act 1952 ರಡಿ ಅಧಿಕಾರ ಹೊಂದಿರುತ್ತದೆ. 1994 ರಡಿ Karnataka Act No. 31 ರಲ್ಲಿ (ಮೊದಲ ಪ್ರಕಟಣೆ ಕರ್ನಾಟಕ ವಿಶೇಷ ರಾಜ್ಯ ಪತ್ರ ದಿನಾಂಕ: 03.10.1994) ಆಯೋಗಕ್ಕೆ ಶಾಸನ ಬದ್ಧ ಸಂಸ್ಥೆಯ ಮಾನ್ಯತೆ ನೀಡಲಾಗಿರುತ್ತದೆ. ತದನಂತರ ಅವಶ್ಯಕತೆ ಮತ್ತು ಅಗತ್ಯಗನುಗುಣವಾಗಿ ಆಯೋಗದ ಅಧಿನಿಯಮ ತಿದ್ದುಪಡಿಯಾಗಿದ್ದು, Karnataka Act 13 of 2016 ಬಹುಮುಖ್ಯವಾದ ತಿದ್ದುಪಡಿ, ಇದರನ್ವಯ ಆಯೋಗಕ್ಕೆ ‘ಸಿವಿಲ್ ನ್ಯಾಯಾಲಯದ ಅಧಿಕಾರ’ ನೀಡಲಾಗಿರುತ್ತದೆ. ಅದರಂತೆ ಆಯೋಗದ ನಿಯಾಮಾವಳಿಗಳು ಕರ್ನಾಟಕ ರಾಜ್ಯ ಪತ್ರ ದಿನಾಂಕ: 10.10.2000, ಸರ್ಕಾರ ಅಧಿಸೂಚನೆ ಸಂ: DPAR 19 LMR 95 ಮತ್ತು ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂ: MWD 229 LML 2016, ದಿ: 10.07.2017ರ ಅನ್ವಯ ಪ್ರಕಟಿಸಲಾಗಿರುತ್ತದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಅಧ್ಯಕ್ಷರು ಹಾಗೂ ಎಂಟು ಜನ ಸದಸ್ಯರುಗಳನ್ನು ಒಳಗೊಂಡಿದ್ದು, ಸರ್ಕಾರದಿಂದ ನೇಮಿಸಲ್ಪಿರುತ್ತದೆ. ಕಾರ್ಯದರ್ಶಿಗಳು ಆಯೋಗದ ಮುಖ್ಯ ಕಾರ್ಯನಿರ್ವಹಕರಾಗಿರುತ್ತಾರೆ.

ಶ್ರೀ ಸಿದ್ದರಾಮಯ್ಯ, ಮಾನ್ಯ ಮುಖ್ಯಮಂತ್ರಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು.  

ಶ್ರೀ ಅಬ್ದುಲ್ ಅಜೀಮ್,  ಅಧ್ಯಕ್ಷರಾಗಿ ಸರ್ಕಾರದಿಂದ ನೇಮಿಸ್ಪಟ್ಟಿರುತ್ತಾರೆ. 

ಶ್ರೀಮತಿ ಸಲ್ಮಾ ಫಿರ್ದೋಸ್, ಆಯೋಗದ ಕಾರ್ಯದರ್ಶಿಯಾಗಿರುತ್ತಾರೆ .

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧಿನಿಯಮ 1994 ಸೆಕ್ಷನ್ 2 (ಡಿ) ರಡಿ ಈ ಕೆಳಕಂಡ ಸಮುದಾಯಗಳನ್ನು “ಅಲ್ಪಸಂಖ್ಯಾತರೆಂದು” ಸರ್ಕಾರವು ಘೋಷಿಸಿರುತ್ತದೆ.

1. ಮುಸ್ಲಿಂ

2. ಕ್ರಿಶ್ಚಿಯನ್

3. ಜೈನ್

4. ಬುದ್ಧಿಸ್ಟ್

5. ಸಿಖ್

6. ಝೋರಾಸ್ಟ್ರೀನ್ (ಪಾರ್ಸಿ)

ಇನ್ನಷ್ಟು ಓದಿ
-->