Loading...

ಅಲ್ಪಸಂಖ್ಯಾತರ ಯೋಜನೆಗಳು

ಅಲ್ಪಸಂಖ್ಯಾತರ ಯೋಜನೆಗಳು

ವಿವರಗಳು

ಯೋಜನೆಯ ಹೆಸರು:
ಅರಿವು ಸಾಲ ಯೋಜನೆ (2021-22 ನೇ ಸಾಲಿಗೆ ಮಾತ್ರ)
ವಿವರಣೆ:

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯನ್ನು 2021-22ನೇ ಸಾಲಿನ ಅನ್ವಯವಾಗುವಂತೆ ಹೊಸ (ಪ್ರೆಶ್) ಮತ್ತು ನವೀಕರಣ (ರಿನ್ಯೂವಲ್) ಪ್ರಕರಣಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾದ ವೈದ್ಯಕೀಯ/ವೃತ್ತಿಪರ ಕೋರ್ಸುಗಳ ವಿಧ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ. ನವೀಕರಣ ವಿದ್ಯಾರ್ಥಿಗಳೂ ಆನ್ ಲೈನ್ ನಲ್ಲಿ ನವೀಕರಣ ಅರ್ಜಿಯನ್ನು ಸಲ್ಲಿಸುವಾಗ ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದಿರುವ ಸಾಲದ ಮೊತ್ತದ ಶೇ.12% ರಷ್ಟನ್ನು ಜಿಲ್ಲಾ ಕಚೇರಿಗಳಲ್ಲಿ ಪಾವತಿಸಿರಬೇಕು.


ಅರ್ಹತೆ:

1. ವೃತ್ತಿಪರ ತರಬೇತಿಗಳಾದ ಬಿ.ಇ., ಬಿ.ಟೆಕ್, ಎಂ.ಬಿ.ಬಿ.ಎಸ್., ಬಿ.ಡಿ.ಎಸ್ ಆಯುಶ್ ಇವುಗಳಿಗೆ ಅವಕಾಶಗಳಿರುತ್ತದೆ.
2. ವಿದ್ಯಾರ್ಥಿಗಳ ಕೆ.ಇ.ಎ. ಅಥವಾ ನೀಟ್ ಮೂಲಕ ಆಯ್ಕೆಯಾಗಿರಬೇಕು.
3. ಸಾಲದ ಮೊತ್ತ ಎಂ.ಬಿ.ಬಿ.ಎಸ್. ತರಬೇತಿಗೆ 2/- ಲಕ್ಷ ಮತ್ತು ಬಿ.ಇ., ಬಿ.ಟೆಕ್, ಬಿ.ಡಿ.ಎಸ್, ಆಯುಶ್, ತರಬೇತಿಗಳಿಗೆ
ಗರಿಷ್ಠ 30,000/- ಸಾವಿರ ರೂಪಾಯಿಗಳು ಮಾತ್ರ

ಸಾಲದ ಮೊತ್ತವು ವಿಧ್ಯಾರ್ಥಿಗಳು ವ್ಯಾಸಂಗ ಪಡೆಯುವ ಅಕೌಂಟಿಗೆ ನೇರವಾಗಿ ವರ್ಗಾವಣೆಯಾಗುತ್ತದೆ.


ಸ್ಥಿತಿ:
Active
Link:
https://kmdconline.karnataka.gov.in/Portal/login