Loading...

ಅಲ್ಪಸಂಖ್ಯಾತರ ಯೋಜನೆಗಳು

ಅಲ್ಪಸಂಖ್ಯಾತರ ಯೋಜನೆಗಳು

ವಿವರಗಳು

ಯೋಜನೆಯ ಹೆಸರು:
ವಿದ್ಯಾರ್ಥಿಗಳಿಗೆ ಎಂ.ಪಿಲ್ ಮತ್ತು ಪಿಎಚ್.ಡಿ ಫೆಲೋಶಿಫ್ (ಜೆ.ಆರ್.ಎಫ್.ಮಾದರಿ) ನೀಡಲು ಅರ್ಜಿ ಆಹ್ವಾನಿಸಲಾಗಿದೆ
ವಿವರಣೆ:

ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನ. ಅರ್ಜಿಗಳನ್ನು https://sevasindhuservices.karnataka.gov.in ನಲ್ಲಿ ಸಲ್ಲಿಸಬಹುದು. ಅರ್ಜಿಯ ಕಾಗದದ ಪ್ರತಿಯನ್ನು ಅಗತ್ಯ ದಾಖಲೆಗಳೊಡನೆ ಅಧಿಕಾರ ವ್ಯಾಪ್ತಿಯ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಸಲ್ಲಿಸತಕ್ಕದ್ದು. ಯೋಜನೆಯ ವಿವರಗಳಿಗಾಗಿ https://dom.karnataka.gov.in ನೋಡಿ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಭೇಟಿ ನೀಡಬಹುದು ಅಥವಾ 24X7 ಸಹಾಯವಾಣಿ ಮೊ.ಸಂ. 8277799990 ಗೆ ಕರೆ ಮಾಡಬಹುದು.


ಅರ್ಹತೆ:
2021-22 ಮತ್ತು 2022-23ರ ವರ್ಷದ ಅವಧಿಯಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಗೆ ನೋಂದಣಿ ಮಾಡಿಸಿರುವ ವಿದ್ಯಾರ್ಥಿಗಳು ಮಾತ್ರ ಫೆಲೋಶಿಫ್ ಗೆ ಅರ್ಹರಾಗಿರುತ್ತಾರೆ.
ಅರ್ಹತೆ:
• ವಿದ್ಯಾರ್ಥಿಗಳು ಕರ್ನಾಟಕದವರಾಗಿರಬೇಕು ಮತ್ತು ಜೈನ, ಪಾರ್ಸಿ, ಬೌದ್ಧ, ಸಿಖ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರಬೇಕು.
• ಅಭ್ಯರ್ಥಿಯು ಪೂರ್ಣಾವಧಿ ಕೋರ್ಸ್ ಗೆ ಎನ್ ರೋಲ್ ಮಾಡಿರಬೇಕು.
• ವಿದ್ಯಾರ್ಥಿಯ ಪಾಲಕರ ಅಥವಾ ಪೋಷಕರ ವಾರ್ಷಿಕ ಆದಾಯ ರೂ.8 ಲಕ್ಷ ಮೀರಿರಬಾರದು.
• ಗರಿಷ್ಠ ವಯೋಮಿತಿ 35 ವರ್ಷಗಳು.
• ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.

ಸ್ಥಿತಿ:
Inactive