Chief Minister Of Karnataka

ಶ್ರೀ ಹೆಚ್ ಡಿ ಕುಮಾರ್ಸ್ವಾಮಿ
ಸನ್ಮಾನ್ಯ ಮುಖ್ಯ ಮಂತ್ರಿಗಳ


ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ  |  karnataka state minorities commission assets/images/main.png
Minorities Minister Of Karnataka

ಶ್ರೀ ಬಿ ಝಡ್ ಜಮೀರ್ ಅಹಮ್ಮದ್ ಖಾನ್
ಮಾನ್ಯ ಅಲ್ಪಸಂಖ್ಯಾತರ ಕಲ್ಯಾಣ , ವಕ್ಫ್ ಮತ್ತು ಹಾಜ್ ಇಲಾಖೆ ಸಚಿವರು

ಆಯೋಗದ ಅಧಿಕಾರಗಳು

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮದ 10ನೇ ಪ್ರಕರಣದ

(1)ನೇ ಉಪಪ್ರಕರಣದಲ್ಲಿ ಹೇಳಿದ ಯಾವುವೇ ಪ್ರಕಾರ್ಯಗಳನ್ನು ನಿರ್ವಹಿಸುವಾಗ, ಆಯೋಗವು, ದಾವೆಯ ವಿಚಾರಣೆ ನಡೆಸುವ ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರಗಳನ್ನು, ವಿಶೇಷವಾಗಿ, ಈ ಮುಂದಿನ ವಿಷಯಗಳ ಸಂಬಂಧದಲ್ಲಿ ಹೊಂದಿರತಕ್ಕದ್ದು, ಎಂದರೆ:-

(ಎ) ರಾಜ್ಯದ ಯಾವುದೇ ಭಾಗದ ಯಾವೊಬ್ಬ ವ್ಯಕ್ತಿಗೆ ಸಮನು ನೀಡುವುದು ಮತ್ತು ಹಾಜರಾತಿಯನ್ನು ಒತ್ತಾಯಪಡಿಸುವುದು ಹಾಗೂ ಪ್ರಮಾಣದ ಮೇಲೆ ಆತನನ್ನು ವಿಚಾರಣೆ ಮಾಡುವುದು;

(ಬಿ) ಯಾವುದೇ ದಸ್ತಾವೇಜನ್ನು ಹುಡುಕುವುದು ಮತ್ತು ಹಾಜರುಪಡಿಸುವುದನ್ನು ಅಗತ್ಯಪಡಿಸುವುದು;

(ಸಿ) ಅಫಿದಾವಿತ್ ಮೇಲೆ ಸಾಕ್ಷ್ಯವನ್ನು ಸ್ವೀಕರಿಸುವುದು;

(ಡಿ) ಯಾವುದೇ ನ್ಯಾಯಾಲಯ ಅಥವಾ ಕಚೇರಿಯಿಂದ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ಪ್ರತಿಯನ್ನು ಕಡ್ಡಾಯವಾಗಿ ಕೋರುವುದು;

(ಇ) ಸಾಕ್ಷ್ಯಗಳು ಮತ್ತು ದಸ್ತಾವೇಜುಗಳ ಪರಿಶೀಲನೆಗಾಗಿ ಆಜ್ಞಾಪನೆಗಳನ್ನು (ಕಮೀಷನ್) ಹೊರಡಿಸುವುದು; ಮತ್ತು (ಎಫ್) ನಿಯಮಿಸಬಹುದಾದ ಯಾವುದೇ ಇತರ ವಿಷಯ.



© karnataka State Minorities Commission 2019 | Powered By ZINGWEBS