Chief Minister Of Karnataka

ಶ್ರೀ ಹೆಚ್ ಡಿ ಕುಮಾರ್ಸ್ವಾಮಿ
ಸನ್ಮಾನ್ಯ ಮುಖ್ಯ ಮಂತ್ರಿಗಳ


ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ  |  karnataka state minorities commission assets/images/main.png
Minorities Minister Of Karnataka

ಶ್ರೀ ಬಿ ಝಡ್ ಜಮೀರ್ ಅಹಮ್ಮದ್ ಖಾನ್
ಮಾನ್ಯ ಅಲ್ಪಸಂಖ್ಯಾತರ ಕಲ್ಯಾಣ , ವಕ್ಫ್ ಮತ್ತು ಹಾಜ್ ಇಲಾಖೆ ಸಚಿವರು

ಆಯೋಗದ ಪ್ರಕಾರ್ಯಗಳು

(ಎ) ಸಂವಿಧಾನದಲ್ಲಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಸಂರಕ್ಷಣೆಗಾಗಿ ರಾಜ್ಯವಿಧಾನ ಮಂಡಲವು ಅಂಗೀಕರಿಸಿದ ಕಾನೂನುಗಳಲ್ಲಿ ಕಲ್ಪಿಸಲಾಗಿರುವ ವಿವಿಧ ರಕ್ಷಣಾ ಕ್ರಮಗಳ ಬಗ್ಗೆ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವುದು; 

(ಬಿ) ಎಲ್ಲಾ ರಕ್ಷಣಾ ಕ್ರಮಗಳ ಪರಿಣಾಮಕಾರಿಯಾದ ಅನುμÁ್ಠನ ಮತ್ತು ಜಾರಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ದøಷ್ಟಿಯಿಂದ ಶಿಫಾರಸು ಮಾಡುವುದು; ಪ್ರಧಾನ ಮಂತ್ರಿಗಳ ಹೊಸ 15 ಅಂಶದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಶಿಫಾರಸ್ಸುಗಳನ್ನು ಮಾಡುವುದು.

(ಸಿ) ಸಂವಿಧಾನದಲ್ಲಿ, ರಾಜ್ಯ ವಿಧಾನಮಂಡಲವು ಅಧಿನಿಯಮಿಸಿದ ಕಾನೂನುಗಳಲ್ಲಿ ಮತ್ತು ಅಲ್ಪಸಂಖ್ಯಾತ ವರ್ಗಗಳಿಗಾಗಿ ಸರ್ಕಾರದ ಕಾರ್ಯನೀತಿಗಳು ಮತ್ತು ಯೋಜನೆಗಳಲ್ಲಿ ಕಲ್ಪಿಸಲಾದ ರಕ್ಷಣಾ ಕ್ರಮಗಳ ಬಗೆಗಿನ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವುದು;

(ಡಿ) ಅಲ್ಪಸಂಖ್ಯಾತ ವರ್ಗಗಳ ಬಗೆಗಿನ ತಾರತಮ್ಯವನ್ನು ತಪ್ಪಿಸುವ ಪ್ರಶ್ನೆಯ ಸಂಬಂಧದಲ್ಲಿ ಅಧ್ಯಯನ, ಸಂಶೋಧನೆ ಮತ್ತು ವಿಶ್ಲೇಷಣೆ ಮಾಡುವುದು;

(ಇ) ಸರ್ಕಾರದ ಉದ್ದಿಮೆಗಳ, ಸರ್ಕಾರದ ಮತ್ತು ಆರೆ ಸರ್ಕಾರಿ ನಿಕಾಯ ಮುಂತಾದವುಗಳ ಸೇವೆಯಲ್ಲಿ ಅಲ್ಪಸಂಖ್ಯಾತ ವರ್ಗಗಳ ಪ್ರಾತಿನಿಧ್ಯವನ್ನು ವಾಸ್ತವಿಕವಾಗಿ ನಿರ್ಧರಿಸುವುದು ಮತ್ತು ಪ್ರಾತಿನಿಧ್ಯವು ಸಾಕಷ್ಟಿಲ್ಲದಿದ್ದ ಸಂದರ್ಭದಲ್ಲಿ, ಅಪೇಕ್ಷಿತ ಮಟ್ಟವನ್ನು ಸಾಧಿಸುವುದಕ್ಕಾಗಿ ಮಾರ್ಗೋಪಾಯಗಳನ್ನು ಸೂಚಿಸುವುದು;

(ಎಫ್) ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು, ನಿರ್ವಹಿಸಲು ಮತ್ತು ಉತ್ತೇಜಿಸಲು ಶಿಫಾರಸುಗಳನ್ನು ಮಾಡುವುದು; (ಜಿ) ಗೊತು ್ತಪಡಿಸಿದ ಅವಧಿಯಲ್ಲಿ ಸರ್ಕಾರಕ್ಕೆ ನಿಯತಕಾಲಿಕ ವರದಿಗಳನ್ನು ಸಲ್ಲಿಸುವುದು;

(ಹೆಚ್) ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣ ಮತ್ತು ಅಭಿವøದ್ಧಿಯ ದøಷ್ಟಿಯಿಂದ ಮುಖ್ಯವಾದುದೆಂದು ಆಯೋಗವು ಅಭಿಪ್ರಾಯಪಡುವ ಯಾವುದೇ ಇತರ ವಿಷಯದ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಸೂಕ್ತ ಶಿಫಾರಸುಗಳನ್ನು ಮಾಡುವುದು;

(ಐ) ಅಲ್ಪಸಂಖ್ಯಾತ ವರ್ಗಗಳ ಕುಂದುಕೊರತೆಗಳನ್ನು ಪರಿಗಣಿಸುವುದು ಮತು ್ತ ಕಾಲಕಾಲಕ್ಕೆ ಸೂಕ್ತ ಪರಿಹಾರವನ್ನು ಸೂಚಿಸುವುದು;

(ಜೆ) ಅಲ್ಪಸಂಖ್ಯಾತರ ಹಕ್ಕುಗಳ ಮತ್ತು ರಕ್ಷಣಾ ಕ್ರಮಗಳ ಬಗೆಗಿನ ವಂಚನೆಗೆ ಸಂಬಂಧಿಸಿದ ನಿರ್ದಿಷ್ಟ ದೂರುಗಳ ಬಗ್ಗೆ ಪರಿಶೀಲಿಸುವುದು ಮತ್ತು ಅಂಥ ವಿಷಯಗಳನ್ನು ಸೂಕ್ತ ಪ್ರಾಧಿಕಾರದ ಮುಂದೆ ತರುವುದು:



© karnataka State Minorities Commission 2019 | Powered By ZINGWEBS